ಪು.ತಿ.ನ ರವರ ಈ ಕವನ ನಮ್ಮನ್ನು ಕುಳಿತಲ್ಲೆ ನದಿಯ ದಂಡೆಗೆ ಕರೆದ್ದೂಯುತ್ತದೆ ! ಅದ್ಬುತ ಸಾಲುಗಳು
ಸ್ಥವಿರಗಿರಿಯ ಚಲನದಾಸೆ ಮೂಕವನದ ಗೀತದಾಸೆ
ಸೃಷ್ಠಿಹೊರೆಯ ಹೊತ್ತ ತೆರೆಯ ನಗಿವಿನಾಸೆ ನಾ
ಬಾಳ್ವೆಗೆಲ್ಲ ನಾನೇ ನೆಚ್ಚು ಲೋಕಕೆಲ್ಲ ಅಚ್ಚು ಮೆಚ್ಚು
ನಾನೇ ನಾನೇ ವಿಧಿಯ ಹುಚ್ಚು ಹೊನಲ ರಾಣಿ ನಾ
ಕಿರಣ ನೇಯ್ದ ಸರಿಗೆಯುಡಿಗೆ ಇರುಳು ಕೊಟ್ಟ ತಾರೆತೊಡಿಗೆ
ಇಂದು ಕಳೆಯೊ ಹೂವಮುಡಿಗೆ ದೇವಕನ್ಯೆ ನಾ
ಬೆಳ್ಳಿ ನೊರೆಯ ನಗೆನಗುತ್ತ ತೆರೆಯ ನೆರೆಯ ಚಿಮುಕಿಸುತ್ತ
ಕಡಲ ವರಿಸೆ ತವಕಿಸುತ್ತ ನಡೆವ ವಧುವೆ ನಾ
ಸ್ಥವಿರಗಿರಿಯ ಚಲನದಾಸೆ ಮೂಕವನದ ಗೀತದಾಸೆ
ಸೃಷ್ಠಿಹೊರೆಯ ಹೊತ್ತ ತೆರೆಯ ನಗಿವಿನಾಸೆ ನಾ
ನಲಿತ ಕುಣಿತವೆನ್ನ ಶೀಲ ಚಲನವೆನ್ನ ಜೀವಾಳ
ಲುಪ್ತಮಾಗಿದೇಶಕಾಲ ಎನ್ನ ಗಾಯನ
ದಡದ ಗಿಡಕೆ ಪುಷ್ಪಹಾಸ ಸನಿಯದೆಡೆಗೆ ಸಸ್ಯಹಾಸ
ಹಾಸ ಕೀರ್ಣ ಹಾಸ ಪೂರ್ಣ ಎನ್ನ ಜೀವನ
ಸ್ಥವಿರಗಿರಿಯ ಚಲನದಾಸೆ ಮೂಕವನದ ಗೀತದಾಸೆ
ಸೃಷ್ಠಿಹೊರೆಯ ಹೊತ್ತ ತೆರೆಯ ನಗಿವಿನಾಸೆ ನಾ
ನಾನು ನಿಲ್ವುದೊಂದೆ ಕ್ಷಣಂ ಸತತ ಕರ್ವವೆನ್ನ ಗುಣಂ
ಅದಕೆ ಕಾಣೆ ಗೋಳನೆಣಂ ಹರ್ಷವೆನಗೆ ಚಿರಂತನಂ
ಗವಿಗಳಲ್ಲಿ ಉಳ್ಳನಡಗಿ ಬಂಡೆ ಮೇಲೆ ಹವ್ವನೆರಗಿ
ಮಡುವಿನಿಂದ ಮೆಲ್ಲನೆ ಜರುಗಿ ಕಡಲಿಗೊಡುವೆ
ಸ್ಥವಿರಗಿರಿಯ ಚಲನದಾಸೆ ಮೂಕವನದ ಗೀತದಾಸೆ
ಸೃಷ್ಠಿಹೊರೆಯ ಹೊತ್ತ ತೆರೆಯ ನಗಿವಿನಾಸೆ ನಾ
ಅಚರ ಜಗದ ಚಲನದಾಸೆ ಮೂಕ ಜಗದ ಜೀವದಾಸೆ
ನೀತಿ ನಿಯಮ ನಿಯತ ಜಗದ ನಗುವಿನಾಸೆ ನಾ
ಮನ ವಿನೋದ ಮಲೆಯ ಮೋದ ಮುಗಿಲಮೇಲ್ಮೆ ನಾಡ ನಲ್ಮೆ
ನಾನೇ ನಾನೇ ಇವನ ಒಲ್ಮೆ ಹೊನಲ ರಾಣಿ ನಾ
ನಾನೇ ನಾನೇ ಇವನ ಒಲ್ಮೆ ಹೊನಲ ರಾಣಿ ನಾ
ಸ್ಥವಿರಗಿರಿಯ ಚಲನದಾಸೆ ಮೂಕವನದ ಗೀತದಾಸೆ
ಸೃಷ್ಠಿಹೊರೆಯ ಹೊತ್ತ ತೆರೆಯ ನಗಿವಿನಾಸೆ ನಾ
ಬಾಳ್ವೆಗೆಲ್ಲ ನಾನೇ ನೆಚ್ಚು ಲೋಕಕೆಲ್ಲ ಅಚ್ಚು ಮೆಚ್ಚು
ನಾನೇ ನಾನೇ ವಿಧಿಯ ಹುಚ್ಚು ಹೊನಲ ರಾಣಿ ನಾ
ಕಿರಣ ನೇಯ್ದ ಸರಿಗೆಯುಡಿಗೆ ಇರುಳು ಕೊಟ್ಟ ತಾರೆತೊಡಿಗೆ
ಇಂದು ಕಳೆಯೊ ಹೂವಮುಡಿಗೆ ದೇವಕನ್ಯೆ ನಾ
ಬೆಳ್ಳಿ ನೊರೆಯ ನಗೆನಗುತ್ತ ತೆರೆಯ ನೆರೆಯ ಚಿಮುಕಿಸುತ್ತ
ಕಡಲ ವರಿಸೆ ತವಕಿಸುತ್ತ ನಡೆವ ವಧುವೆ ನಾ
ಸ್ಥವಿರಗಿರಿಯ ಚಲನದಾಸೆ ಮೂಕವನದ ಗೀತದಾಸೆ
ಸೃಷ್ಠಿಹೊರೆಯ ಹೊತ್ತ ತೆರೆಯ ನಗಿವಿನಾಸೆ ನಾ
ನಲಿತ ಕುಣಿತವೆನ್ನ ಶೀಲ ಚಲನವೆನ್ನ ಜೀವಾಳ
ಲುಪ್ತಮಾಗಿದೇಶಕಾಲ ಎನ್ನ ಗಾಯನ
ದಡದ ಗಿಡಕೆ ಪುಷ್ಪಹಾಸ ಸನಿಯದೆಡೆಗೆ ಸಸ್ಯಹಾಸ
ಹಾಸ ಕೀರ್ಣ ಹಾಸ ಪೂರ್ಣ ಎನ್ನ ಜೀವನ
ಸ್ಥವಿರಗಿರಿಯ ಚಲನದಾಸೆ ಮೂಕವನದ ಗೀತದಾಸೆ
ಸೃಷ್ಠಿಹೊರೆಯ ಹೊತ್ತ ತೆರೆಯ ನಗಿವಿನಾಸೆ ನಾ
ನಾನು ನಿಲ್ವುದೊಂದೆ ಕ್ಷಣಂ ಸತತ ಕರ್ವವೆನ್ನ ಗುಣಂ
ಅದಕೆ ಕಾಣೆ ಗೋಳನೆಣಂ ಹರ್ಷವೆನಗೆ ಚಿರಂತನಂ
ಗವಿಗಳಲ್ಲಿ ಉಳ್ಳನಡಗಿ ಬಂಡೆ ಮೇಲೆ ಹವ್ವನೆರಗಿ
ಮಡುವಿನಿಂದ ಮೆಲ್ಲನೆ ಜರುಗಿ ಕಡಲಿಗೊಡುವೆ
ಸ್ಥವಿರಗಿರಿಯ ಚಲನದಾಸೆ ಮೂಕವನದ ಗೀತದಾಸೆ
ಸೃಷ್ಠಿಹೊರೆಯ ಹೊತ್ತ ತೆರೆಯ ನಗಿವಿನಾಸೆ ನಾ
ಅಚರ ಜಗದ ಚಲನದಾಸೆ ಮೂಕ ಜಗದ ಜೀವದಾಸೆ
ನೀತಿ ನಿಯಮ ನಿಯತ ಜಗದ ನಗುವಿನಾಸೆ ನಾ
ಮನ ವಿನೋದ ಮಲೆಯ ಮೋದ ಮುಗಿಲಮೇಲ್ಮೆ ನಾಡ ನಲ್ಮೆ
ನಾನೇ ನಾನೇ ಇವನ ಒಲ್ಮೆ ಹೊನಲ ರಾಣಿ ನಾ
ನಾನೇ ನಾನೇ ಇವನ ಒಲ್ಮೆ ಹೊನಲ ರಾಣಿ ನಾ